MOU between Samriddhi and GKVK, Bengaluru for innovation in agriculture sector

ಕೃಷಿ ಕ್ಷೇತ್ರದಲ್ಲಿ ನಾವಿನ್ಯತೆಗಾಗಿ ಜಿಕೆವಿಕೆ ಜೊತೆ ಸಮೃದ್ಧಿ ಸಂಸ್ಥೆ ಒಪ್ಪಂದ

ಕೃಷಿ ಕ್ಷೇತ್ರದಲ್ಲಿ ನಾವಿನ್ಯತೆ ಮತ್ತು ಸಂಶೋಧನೆಯನ್ನು ಉತ್ತೇಜಿಸುವ ಸಲುವಾಗಿ ಹಾಗೂ ರೈತ ಉತ್ಪಾದಕ ಕಂಪನಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ಪ್ರತಿಷ್ಠಿತ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಜೊತೆ ಮಾಗಡಿ ತಾಲೂಕಿನ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿದೆ. ಕೃಷಿ ವಲಯದಲ್ಲಿನ ಸಂಶೋಧನೆಯ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸುವ ಗುರಿಯೊಂದಿಗೆ ಈ ಒಪ್ಪಂದವಾಗಿದೆ. ಈ ನಮ್ಮ ಎರಡು ಸಂಸ್ಥೆಗಳ ಒಡಂಬಡಿಕೆ ಕೃಷಿಗೆ ಒಂದು ನಿರ್ಣಾಯಕ ಹೆಜ್ಜೆಯಾಗಲಿದೆ ಎಂದು ಕೃಷಿ ವಿಜ್ಞಾನ ಸಂಸ್ಥೆಯ ಕುಲಪತಿ ಡಾಕ್ಟರ್ ಸುರೇಶ್ ತಿಳಿಸಿದರು.


ಕೃಷಿಯಲ್ಲಿ ಮಹತ್ವದ ಪ್ರಗತಿ ಇದರಿಂದ ಸಾಧ್ಯವಾಗಲಿದೆ ಈ ಮೂಲಕ ಉತ್ಪಾದಕತೆ ಸಮರ್ಥನೀಯತೆ ಹಾಗೂ ಸಂಪನ್ಮೂಲವನ್ನು ಹೆಚ್ಚಿಸುವ ಮೂಲಕ ಕೃಷಿ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಪ್ರಾಮಾಣಿಕ ಪ್ರಯತ್ನ ಇದರಿಂದ ಸಾಧ್ಯ ಈ ಮೂಲಕ ಕೃಷಿಯಲ್ಲಿ ದಕ್ಷತೆ ಮೆರೆಯಲಿದ್ದೇವೆ ಎಂದು ಕುಲ ಸಚಿವರಾದ ಪ್ರೊಫೆಸರ್ ಬಸವೇಗೌಡ ತಿಳಿಸಿದರು.

  • MOU with GKVK

ಬೆಳೆ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು, ಒಟ್ಟಾರೆ ಕೃಷಿ ನಿರ್ವಹಣೆಯನ್ನು ಸುಧಾರಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ ಎಂದು ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾಗಿರುವ ಡಾಕ್ಟರ್ ಡಿಸಿ ರಾಮಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ಮಳೆಯಾಶ್ರಿತ ಪ್ರದೇಶಗಳಲ್ಲಿ ಕೃಷಿ ಉತ್ಪನ್ನಗಳ ಇಳುವರಿ ಹೆಚ್ಚಿಸುವ ಸಲುವಾಗಿ ಇದೊಂದು ಅರ್ಥಪೂರ್ಣ ಒಪ್ಪಂದವಾಗಿದೆ ಇಳುವರಿ ಮತ್ತು ಉತ್ಪಾದಕತೆ ಹೆಚ್ಚು ಮಾಡಲು ಹೊಸ ರೀತಿಯ ತಾಂತ್ರಿಕ ನೆರವನ್ನು ಆಸಕ್ತರಿಗೆ ನೀಡುವುದು ಹಾಗೂ ಬೆಳೆ ಉತ್ಪಾದಕತೆಯ ವಿಷಯದಲ್ಲಿ ವೈಜ್ಞಾನಿಕ ತಿಳುವಳಿಕೆಯನ್ನು ನೀಡುವುದು ಈ ಒಪ್ಪಂದದ ಪ್ರಮುಖ ಸಾರವಾಗಿದೆ. ಈ ಒಪ್ಪಂದದ ಸಮಾರಂಭದಲ್ಲಿ ಡಾಕ್ಟರ್ ಸಿದ್ದಯ್ಯನವರು, ಸ್ಟೆಪ್ ಸಂಸ್ಥೆಯ ಅಧ್ಯಕ್ಷರಾಗಿರುವ ಪ್ರಕಾಶ್ ರವರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು